ಮಕ್ಕಳಲ್ಲಿನ ಆಟಿಸಂ ಕುರಿತಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಷಕರು ಮತ್ತು ತರಬೇತುದಾರರ ಸಾಮರ್ಥ್ಯ ಹೆಚ್ಚಿಸುವ ಅನನ್ಯವಾದ ವೇದಿಕೆ


ಮಕ್ಕಳಲ್ಲಿನ ಆಟಿಸಂ ಕುರಿತಾಗಿ 3 ನಗರಗಳಲ್ಲಿ ನಡೆಯಲಿರುವ ಸೆಮಿನಾರ್, ಇದರಲ್ಲಿ ಪೋಷಕರನ್ನು ಮತ್ತು ತರಬೇತುದಾರರನ್ನು ಉದ್ದೇಶಿಸಿ ಅಂತರಾಷ್ಟ್ರೀಯ ಖ್ಯಾತಿಯ ವೈದ್ಯರು ಮಾತನಾಡಲಿದ್ದಾರೆ

ಮುಂಬಯಿ, ಭಾರತನವೆಂಬರ್ 10, 2015 – ಮುಂಬಯಿಯಲ್ಲಿನ ಮಕ್ಕಳಲ್ಲಿನ ಆಟಿಸಂ ಚಿಕಿತ್ಸಾ ಕೇಂದ್ರವಾದ SAI ಕನೆಕ್ಷನ್ಸ್, ಮುಂಬಯಿ, ಬೆಂಗಳೂರು ಮತ್ತು ನವದೆಹಲಿ ಹೀಗೆ ಈ ಮೂರು ನಗರಗಳಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳಲ್ಲಿನ ಆಟಿಸಂ ತಿಳಿಯದಿರುವ ಸಂಗತಿಗಳ ಕುರಿತಾಗಿ 2 ದಿನದ ಸೆಮಿನಾರ್ ಅನ್ನು ಹಮ್ಮಿಕೊಂಡಿರುವುದಾಗಿ ಘೋಷಣೆ ಮಾಡಿದೆ. Internationally renowned autism consultants – Dr. Rachelle Sheely .ಮತ್ತು Dr. Steven Gutstein from USA, and Mrs. Kamini Lakhani  ಅವರು ಪೋಷಕರಿಗೆ ತಮ್ಮ ಮಕ್ಕಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವಲ್ಲಿ ಸಮರ್ಥರೆಂಬ ಭಾವನೆಯನ್ನು ಮೂಡಿಸಿಕೊಳ್ಳಲು ಮತ್ತು ಮಕ್ಕಳ ಬದುಕಿನ ನಿರ್ವಹಣೆ ಮಾಡುವಲ್ಲಿ ನಿಪುಣತೆಯನ್ನು ಪಡೆಯಲು ಸಹಾಯ ಮಾಡಲಿದ್ದಾರೆ. ಸೆಮಿನಾರ್ ಅನ್ನು ಈ ಮುಂದಿನ ದಿನಾಂಕಗಳಂದು ಆಯೋಜಿಸಲಾಗಿದೆ – ಡಿಸೆಂಬರ್ 5 ಮತ್ತು 6, 2015 ರಂದು ಮುಂಬಯಿ, ಡಿಸೆಂಬರ್ 9 ಮತ್ತು 10, 2015 ರಂದು ಬೆಂಗಳೂರು ಮತ್ತು ಡಿಸೆಂಬರ್ 12 ಮತ್ತು 13, 2015 ರಂದು ದೆಹಲಿ.
 
ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಎನ್ನುವುದು ಮೆದುಳಿನ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯು ತಾನು ಸಂವಹನ ಮಾಡುವ ಮತ್ತು ಇತರ ಜನರೊಂದಿಗೆ ಸಂಬಂಧ ಉಂಟುಮಾಡಿಕೊಳ್ಳುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ. ಸಾಮಾಜಿಕ ಸಂವಹನಗಳು, ಮೌಖಿಕ ಮತ್ತು ಮೌಖಿವಲ್ಲದ ಸಂವಹನಗಳು ಮತ್ತು ಸಹಜ ಪ್ರೇರೇಪಣೆಗಳ ಸಂದರ್ಭಗಳಲ್ಲಿ ಮಿತಿಗಳನ್ನು ಗಮನಿಸಬಹುದು. ನಿಯಂತ್ರಿತ ಮತ್ತು ಪುನರಾವರ್ತನೆಯ ನಡವಳಿಕೆಯು ಆಡಿಸಮ್ ಸ್ಪೆಕ್ಟ್ರಮ್ ಇರುವ ವ್ಯಕ್ತಿಯಲ್ಲಿನ ನಡವಳಿಕೆಯ ಭಾಗವಾಗಿದೆ.PDD-NOS ಮತ್ತು ಆಸ್ಪೆರ್ಗರ್ಸ್ ಸಿಂಡ್ರೋಮ್ ಅನ್ನು ASD ಅಡಿಯಲ್ಲಿ ವರ್ಗೀಕರಿಸಬಹುದು. ಕೆಲವು ಗುಣಲಕ್ಷಣಗಳು ಸೌಮ್ಯ ಪ್ರಮಾಣದ್ದಾಗಿದ್ದರೂ, ಇತರವುಗಳು ಸ್ವಲ್ಪ ತೀವ್ರವಾಗಿರಬಹುದು.
 
Ms Kamini Lakhani, Founder & Certified Trainer at SAI Connections, “ಮಗುವಿನಲ್ಲಿ ಆಟಿಸಂ ಸಮಸ್ಯೆಯನ್ನು ಪತ್ತೆಹಚ್ಚಿದಾಗ, ಪೋಷಕರಿಗೆ ಹೆಚ್ಚು ತೊಂದರೆಯ ಅನುಭವವಾಗುತ್ತದೆ. ಅವರಿಗೆ ಮನೋವಿಕಾರ ರೋಗವನ್ನು ನಿರ್ವಹಣೆ ಮಾಡುವುದು ಸವಾಲಿನ ಮತ್ತು ಆಯಾಸಕರ ಕಾರ್ಯವಾಗಿದೆ. ತಮ್ಮ ಮಕ್ಕಳಲ್ಲಿ ಯಾಂತ್ರಿಕವಾದ ಮತ್ತು ಆಕ್ರಮಣಶೀಲ ನಡವಳಿಕೆಯನ್ನು (ಮೆಲ್ಟ್ ಡೌನ್ಸ್ ಎಂದೂ ಕರೆಯಲಾಗುತ್ತದೆ) ಕಡಿಮೆ ಮಾಡಲು ಅವರು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಾರೆ. ಇದೇ ಸಂದರ್ಭದಲ್ಲಿ ಅವರು ಉದ್ಯೋಗವನ್ನು ನಿರ್ವಹಣೆ ಮಾಡುವಂತೆ ಸಾಧ್ಯವಾಗಿಸುವುದಕ್ಕಾಗಿ ಅವರ ಸಂವಹನ, ಶೈಕ್ಷಣಿಕ, ಸಾಮಾಜಿಕ ವರ್ತನೆಗಳು ಮತ್ತು ಕೌಶಲ್ಯಗಳನ್ನು ಸುಧಾರಿಸಲು ಸಹ ಅವರು ಕಾರ್ಯಪ್ರವೃತ್ತರಾಗುತ್ತಾರೆ. ಆದರೆ ಹಲವಾರು ಕುಟುಂಬಗಳು ಮತ್ತು ವೃತ್ತಿಪರರು ಈ ನಿಟ್ಟಿನಲ್ಲಿ ದೃಢವಾಗಿ ಪ್ರಯತ್ನಿಸಿದರೂ ಮತ್ತು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡರೂ, ಪ್ರೋತ್ಸಾಹದಾಯಕ ಫಲಿತಾಂಶಗಳನ್ನು ಪಡೆಯುವುದಿಲ್ಲ. ಏನೋ ಕಾಣೆಯಾಗಿರುವ ಭಾವನೆ ಇನ್ನೂ ಅವರಲ್ಲಿರುತ್ತದೆ. ಇದರಿಂದ ಹೊರಬರಲು, ಪ್ರೇರೇಪಣೆ, ಜಾಗೃತಿ, ಆಲೋಚನೆ ಮತ್ತು ಸಮಸ್ಯೆ ಪರಹರಿಸುವಂತಹ ಆಟಿಸಂ ಮೂಲ ಕೊರತೆಗಳ ಬಗ್ಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
 
ಈ 2-ದಿನದ ಕಾರ್ಯಾಗಾರಗಳು ಪೋಷಕರ ಈ ಕಳವಳಗಳನ್ನು ಪರಿಹರಿಸಲು ಆಯೋಜಿಸಲಾಗಿದೆ. ಪೋಷಕರು ಮತ್ತು ವೃತ್ತಿಪರರು ಮಕ್ಕಳಲ್ಲಿನ ಆಟಿಸಂ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ವರ್ಷಗಳ ಅಧ್ಯಯನದ ಅನುಭವ ಪಡೆದ ತಜ್ಞರೊಂದಿಗೆ ಸಮಾಲೋಚನೆ ಮಾಡುತ್ತಾರೆ. ಪೋಷಕರಿಗೆ ಈ ಸಂದರ್ಭದಲ್ಲಿ ತಾವು ಹೊಂದಿರುವ ಸವಾಲುಗಳ ಕುರಿತಾಗಿನ ಪ್ರಮುಖ ಪ್ರಶ್ನೆಗಳಿಗೆ ಭಾಷಣಕಾರರಿಂದಷ್ಟೇ ಅಲ್ಲದೇ ಬಂದಿರುವ ಮಕ್ಕಳ ಮತ್ತು ಹದಿಹರೆಯದವರ ಪೋಷಕರಿಂದ ಸಹ ಆಟಿಸಮ್ ಸ್ಪ್ರೆಕ್ಟ್ರಮ್ ಕುರಿತಾಗಿ ಉತ್ತರಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮಗುವನ್ನು ಸಮರ್ಥರನ್ನಾಗಿಸಲು ಪೋಷಕರು ಮತ್ತು ವೃತ್ತಿಪರರವನ್ನು ಸಹ ಸಬಲೀಕರಣಗೊಳಿಸಲಾಗುತ್ತದೆ. ವಿಶ್ವದಾದ್ಯಂತ ಇತ್ತೀಚಿನ ಪರಿಣಾಮಕಾರಿ ಅಭ್ಯಾಸಗಳ ಕುರಿತಾಗಿ ಸಹ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಕಾರ್ಯಾಗಾರವು ಮಕ್ಕಳ ಮನೋವಿಕಾರದ ಕುರಿತಾಗಿ ಮತ್ತು ಇತರ ಕಲಿಕೆಯ ಅಸಾಮರ್ಥ್ಯತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ. ಜೊತೆಗೆ ಮಕ್ಕಳ ಮನೋವಿಕಾರದ ಕುರಿತಾಗಿ ಗೊತ್ತಿಲ್ಲದೇ ಇರುವ ಸಂಗತಿಗಳ ಬಗ್ಗೆ ಪೋಷಕರು ಮತ್ತು ವೃತ್ತಿಪರರಿಗೆ ತಿಳುವಳಿಕೆಯನ್ನು ಮೂಡಿಸುತ್ತದೆ. 
 
ಹೆಚ್ಚಿನ ವಿವರಗಳಿಗೆ, ದಯವಿಟ್ಟುವಿಶಾಲ್ ಕಟಾರಿಯಾ ಅವರನ್ನು 9819027660 ಸಂಖ್ಯೆಯಲ್ಲಿ ಸಂಪರ್ಕಿಸಿ.
 
# # #
SAI ಕನೆಕ್ಷನ್ಸ್ ಬಗ್ಗೆ
ಕನೆಕ್ಷನ್ಸ್ ಎಂಬುದು ಮುಂಬಯಲ್ಲಿರುವ ಮಕ್ಕಳ ಆಟಿಸಂ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಮತ್ತು ತರಬೇತಿ ನೀಡುವ ಕೇಂದ್ರವಾಗಿದ್ದು, ಮಕ್ಕಳ ಆಟಿಸಂ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚು ಉತ್ಸಾಹಪೂರ್ಣರಾಗಿ ಬದುಕಲು ಮತ್ತು ತಮ್ಮ ಜೀವನನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ವ್ಯಕ್ತಿಗಳನ್ನು ಸಮರ್ಥರನ್ನಾಗಿಸುವತ್ತ ಕಾರ್ಯನಿರ್ವಹಿಸುತ್ತಿದೆ. ಬಾಧಿತ ವ್ಯಕ್ತಿಗಳ ಪೋಷಕರು ಮತ್ತು ಸಂಬಂಧಿಗಳು ಹೆಚ್ಚು ಸಂಪೂರ್ಣವಾದ ಕೌಟುಂಬಿಕ ಬದುಕನ್ನು ಆನಂದಿಸುವಂತೆ ಮಾಡುವಲ್ಲಿ ಸಹ SAI ಕನೆಕ್ಷನ್ ಕಾರ್ಯನಿರ್ವಹಿಸುತ್ತಿದೆ. ಸುಮಾರು ಒಂದು ದಶಕದಿಂದ, SAI ಕನೆಕ್ಷನ್ಸ್ ಪೋಷಕರಿಗೆ ಮಕ್ಕಳ ಆಟಿಸಂ ಎಂದರೇನು ಎಂಬುದನ್ನು ಅರಿತುಕೊಳ್ಳಲು ಸಹಾಯ ಮಾಡಿರುವ ಜೊತೆಗೆ ಆಟಿಸಂ ಸ್ಪೆಕ್ಟ್ರಮ್ ಕುರಿತಾಗಿ ಮಕ್ಕಳು ಮತ್ತು ವ್ಯಕ್ತಿಗಳಿಗೆ ಅತ್ಯುತ್ತಮ ಗುಣಮಟ್ಟದ ಅಂತಾರಾಷ್ಟ್ರೀಯ ಶಿಕ್ಷಣವನ್ನು ಒದಗಿಸಿದೆ. ಮಕ್ಕಳನ್ನು ಚೆನ್ನಾಗಿ ಅರಿತುಕೊಳ್ಳಲು ಮತ್ತು ಅವರ ಪ್ರಗತಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಬಾಧಿತ ಮಕ್ಕಳ ಪೋಷಕರು ಮತ್ತು ಕುಟುಂಬದವರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಸಹ SAI ಕನೆಕ್ಷನ್ಸ್ ನಡೆಸುತ್ತದೆ. ಮೂಲಭೂತ ಕೊರತೆಗಳು ಮತ್ತು ಮಕ್ಕಳ ಮನೋವಿಕಾರದ ಸಹವರ್ತಿ ಸಂಭವಿಸುವ ರೋಗಸ್ಥಿತಿಗಳಿಗೆ ಪರಿಹಾರ ಸೂಚಿಸುವ ಮೂಲಕ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಮತ್ತು ಆಸ್ಪೆರ್ಗರ್ಸ್ ಸಿಂಡ್ರೋಮ್, PDD-NOS ಹಾಗೂ ಅದರ ಇತರ ರೂಪಗಳು)ಗೆ SAI ಕೆನಕ್ಷನ್ಸ್ ಚಿಕಿತ್ಸೆ ನೀಡುತ್ತದೆ. please visit  www.saiconnections.com
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: