ಹೂಡಿಕೆದಾರರನ್ನು ಆಕರ್ಷಿಸಲು MAIT ಮತ್ತು ಕರ್ನಾಟಕ ಸರ್ಕಾರದ ಚರ್ಚೆ


  • ಐಸಿಟಿ ಉತ್ಪಾದನಾ ರಂಗದಲ್ಲಿ ಆಗಬೇಕಾಗಿರುವ ಸುಧಾರಣೆಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆಸಿದ ಉದ್ಯಮಪತಿಗಳು ಮತ್ತು ಸರ್ಕಾರದ ಪ್ರತಿನಿಧಿಗಳು
  • ಬೆಂಗಳೂರಿನಲ್ಲಿ ರೂ. ೧೦೦ ಕೋಟಿ ಹೂಡಿಕೆಗೆ ಪ್ರಾಥಮಿಕ ಮಂಜೂರಾತಿ
  • ಮೈಸೂರಿನಲ್ಲಿ ಐಸಿಟಿ ಮತ್ತು ಇಎಸ್ ಡಿ ಎಂ ಕ್ಲಸ್ಟರ್ ಉದ್ಯಮಗಳಿಗೆ ರೂ. ೩೦ ಕೋಟಿ ಹೂಡಿಕೆಗೆ ಅಸ್ತು

ಬೆಂಗಳೂರು, ಡಿಸೆಂಬರ್ ೧೧, ೨೦೧೫ – ಇಲೆಕ್ಟ್ರಾನಿಕ್ ಮತ್ತು ICT ಉದ್ಯಮಗಳ ಉನ್ನತ ಪ್ರಾತಿನಿಧಿಕ ಸಂಸ್ಥೆ  MAIT (Manufacturers’ Association for Information Technology) ನಗರದಲ್ಲಿ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ‘ಸುಲಭ ವ್ಯಾಪಾರ’ದ ಕುರಿತ ಕಾರ್ಯಾಗಾರವನ್ನು ಏರ್ಪಡಿಸಿತ್ತು. ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿನ ವ್ಯಾಪಾರ ವಾತಾವರಣವನ್ನು ಅವಲೋಕಿಸಲಾಯಿತು.

‘ಸುಲಭ ವ್ಯಾಪಾರ’ ಕುರಿತ ಈ ಕಾರ್ಯಾಗಾರದಲ್ಲಿ ಉದ್ಯಮದ ಅಗ್ರಗಣ್ಯ ವ್ಯಕ್ತಿಗಳು ಹಾಗೂ ಕರ್ನಾಟಕ ಸರ್ಕಾರದ ಐಟಿ,ಬಿಟಿ ಇಲಾಖೆಯ ನಿರ್ದೇಶಕರು ಹಾಗೂ KBITSನ ವ್ಯವಸ್ಥಾಪಕ ನಿರ್ದೇಶಕರಾದ ತನುಶ್ರೀ ದೇಬ್ ಬರ್ಮಾ ಭಾಆಸೇ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿ ಡಾ. ರವೀಂದ್ರ (ನಿವೃತ್ತ ಭಾಆಸೇ)ಕೇಂದ್ರ ಅಬಕಾರಿ ಇಲಾಖೆಯ ಬೆಂಗಳೂರು ವಲಯದ ಮುಖ್ಯಸ್ಥ ನಾಗೇಂದ್ರ ಕುಮಾರ್ ಭಾಗವಹಿಸಿದ್ದರು.

IMG-20151211-WA0006

ಕರ್ನಾಟಕ ಸರ್ಕಾರವು ಐಸಿಟಿ ಉದ್ಯಮದ ಪ್ರಗತಿಗಾಗಿ MAIT ಸಂಸ್ಥೆಯೊಂದಿಗೆ ಕೈ ಜೋಡಿಸಿದೆ. ಮೈಸೂರಿನಲ್ಲಿ ಈಗಾಗಲೇ ರೂ.೩೦ ಕೋಟಿಯ ಹೂಡಿಕೆಗೆ ಅನುಮತಿ ನೀಡಲಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ರೂ. ೧೦೦ ಕೋಟಿ ಹೂಡಿಕೆಗೆ ಪ್ರಾಥಮಿಕ ಅನುಮತಿ ನೀಡಲಾಗಿದೆ. ಸರ್ಕಾರ ಮತ್ತು ಉದ್ಯಮ ಒಟ್ಟಿಗೆ ಕೆಲಸ ಮಾಡಿದಾಗ ಈ ರೀತಿಯ ಸಹಯೋಗವು ಉತ್ತಮ ಫಲ ನೀಡುತ್ತದೆ.” ಎಂದು ಶ್ರೀಮತಿ. ತನುಶ್ರೀ ದೇಬ್ ಬರ್ಮಾ ಹೇಳಿದರು.

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (KIADB), ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಇ-ಆಡಳಿತ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕಾರ್ಮಿಕ ಇಲಾಖೆ ಮುಂತಾದ ಸರ್ಕಾರೀ ಇಲಾಖೆಗಳ ಜೊತೆ ವ್ಯವಹರಿಸುವಾಗ ಉಂಟಾಗುವ ಕಾನೂನಾತ್ಮಕ ಮತ್ತು ಇತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಉದ್ಯಮಪತಿಗಳಿಗೆ ಅವಕಾಶವಾಯಿತು.

ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಇಲೆಕ್ಟ್ರಾನಿಕ್ ಹಾರ್ಡ್ವೇರ್ ತಯಾರಿಕೆಯಲ್ಲಿ ಆಮದನ್ನು ತಗ್ಗಿಸಿ ಮತ್ತು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಿ ೨೦೨೦ರ ವೇಳೆಗೆ ಶೂನ್ಯ ಆಮದು ಸ್ಥಿತಿಯನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ. ಈ ಗುರಿಯನ್ನು ಸಾಧಿಸಲು ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು MAITನ ಉಪಾಧ್ಯಕ್ಷ ಮತ್ತು ಸ್ಮಾರ್ಟ್ ಲಿಂಕ್ ನೆಟ್ವರ್ಕ್ ಸಿಸ್ಟಮ್ಸ್ ಲಿಮಿಟೆಡ್ ನ  ನಿರ್ದೇಶಕ ನಿತಿನ್ ಕುಂಕೊಲಿಯೆಂಕರ್ ಹೇಳಿದರು. ಕಳೆದ ದಶಕದಲ್ಲಿ ಆದ ತಪ್ಪುಗಳನ್ನು ಗುರುತಿಸಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಾಮರಸ್ಯವನ್ನು ಸಾಧಿಸಿದರೆ ಶೂನ್ಯ ಆಮದು ಸ್ಥಿತಿಯನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಬಹುದು ಎಂದರು

ಕಾರ್ಯಾಗಾರದಲ್ಲಿ ಚರ್ಚಿತವಾದ ಮುಖ್ಯ ಅಂಶಗಳು ಹೀಗಿವೆ:-

  • ಸುಲಭ ಹೂಡಿಕೆಗೆ ಸರಳ ವಾತಾವರಣ
  • ವ್ಯಾವಹಾರಿಕ ಸಮಸ್ಯೆಗಳು ಮತ್ತು
  • ಕೈಗೆಟಕುವ ತೆರಿಗೆ ದರಗಳು
  • ಮೂಲಭೂತ ಸೌಕರ್ಯಗಳ ಕೊರತೆಗಳ ನಿವಾರಣೆ
  • ಸರಳ ಮತ್ತು ಪಾರದರ್ಶಕ ಸರ್ಕಾರೀ ಖರೀದಿಗಳು

ಈ ಕಾರ್ಯಾಗಾರದ ಮೂಲಕ ನಾವು ಉದ್ಯಮದ ಆರಂಭ, ನಿರ್ವಹಣೆಯನ್ನು ಸುಲಭ ಗೊಳಿಸಲು ಪ್ರಯತ್ನಿಸುತ್ತಿದ್ದೇವೆ.ಕರ್ನಾಟಕ ಉತ್ತಮ ಸಂಪನ್ಮೂಲಗಳನ್ನು ಹೊಂದಿದೆ ಆದರೆ ಮೂಲಭೂತ ಸೌಲಭ್ಯಗಳೂ ಸಹ ಅವಶ್ಯಕ.” ಎಂದು MAITನ ದಕ್ಷಿಣ ವಿಭಾಗದ ಛೇರ್ಮನ್ ಮತ್ತು ಇಂಟೆಲ್ ನ ಉಪಾಧ್ಯಕ್ಷರಾದ ಎಸ್ ಆರ್ ವಿಜಯ ಶಂಕರ್ ಹೇಳಿದರು.

ಒಟ್ಟಿಗೆ ಕಲೆತು ಕಾರ್ಯ ನಿರ್ವಹಿಸುವ ಕುರಿತು ಅರ್ಥಮಾಡಿಕೊಳ್ಳಬೇಕಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯಗಳ ಇಲಾಖೆಗಳ ನಡುವೆ ಸಾಮರಸ್ಯ ಅವಶ್ಯಕ. ಧೃಡವಾದ ಮಾರ್ಗೋಪಾಯಗಳನ್ನು ರೂಪಿಸುವುದೂ ಅವಶ್ಯಕ.” ಎಂದು ಬಿಎಂಆರ್ ನ ಪಾಲುದಾರ ಮಹೇಶ್ ಜೈ ಸಿಂಗ್ ಹೇಳಿದರು.

GST ಇಂದಿನ ತುರ್ತು ಅವಶ್ಯಕತೆಯಾಗಿದೆ. ಇದರಿಂದ ಏಕರೀತಿಯ ತೆರಿಗೆ ಪದ್ಧತಿ ಅನ್ವಯಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತ ಕಾನೂನುಗಳನ್ನು ರೂಪಿಸುತ್ತಿವೆ” ಎಂದು ನಾಗೇಂದ್ರ ಕುಮಾರ್ ತಿಳಿಸಿದರು.

# # #

About MAIT

MAIT was set up in 1982 for purposes of scientific, educational and IT Industry promotion, Representing Hardware, Training, R&D & Hardware Design and other associated service segments of the Indian IT Industry, MAIT’s charter is to develop a globally competitive Indian IT Industry, promote the usage of IT in India, strengthen the role of IT in national economic development, promote business through international alliances, promote quality consciousness in the IT Industry and transform the Indian IT Industry into a World Scale Industry leading to a World Class Usage and thus a World Size Market. MAIT is recognized by both Govt. and Industry for its role in the growth & development of the IT Hardware industry in India and has emerged as a strong & effective mouthpiece of the industry in the government corridors. Please visit www.mait.com

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: